ಕಾರ್ಡೈಟ್

 ಒಂದು ಕೆಳದರ್ಜೆಯ ಸ್ಫೋಟಕ. ಇದನ್ನು ಸ್ಫೋಟಿಸಿದಾಗ ಹೆಚ್ಚಿನ ಹೊಗೆ ಕಂಡುಬರುವುದಿಲ್ಲ. ಇದರಲ್ಲಿ ಉಚ್ಚ ದರ್ಜೆ ಸ್ಫೋಟಕದಲ್ಲಿ ಇರಬಹುದಾದಂಥ ಕೆಲವು ರಾಸಾಯನಿಕ ವಸ್ತುಗಳಾದ ಗನ್ ಕಾಟನ್, ನೈಟ್ರೋಗ್ಲಿಸರಿನ್ ಇವೆ. ಸಾಮಾನ್ಯವಾಗಿ ಬೆಂಕಿ ತಗುಲಿಸುವುದರಿಂದ ಈ ಸ್ಫೋಟಕವನ್ನು ಆಸ್ಫೋಟಿಸಬಹುದು.

 ಕಾರ್ಡೈಟ್ ತೋಟಬತ್ತಿ (ಕಾರ್ಡೈಟ್ ಫ್ಯೂಸ್) : ಇದು ಹತ್ತಿಯಿಂದ ಮಾಡಿದ ದಾರ. ಇದರ ಸುತ್ತಲೂ ಕಾರ್ಡೈಟ್ ಮಿಶ್ರಣವನ್ನು ಲೇಪಿಸಿ ತರುವಾಯ ನೇಯ್ದ ಹೊದಿಕೆಯನ್ನು (ಟೆಂಟೈಟ್ ರ್ಯಾಪ್ಪಿಂಗ್ಸ್) ಹೊದಿಸಲಾಗುವುದು. ಈ ತೋಟಬತ್ತಿಯನ್ನು ಹೊತ್ತಿಸಿದಾಗ ಯಾವ ರೀತಿಯ ಹೊಗೆಯೂ ಕಾಣುವುದಿಲ್ಲ. ಹೆಚ್ಚಿನ ಕಿಡಿ ಸಹ ಸಿಡಿಯುವುದಿಲ್ಲ. ಆದ್ದರಿಂದ ಇದನ್ನು ಹೊಗೆಯಿಲ್ಲದ ತೋಟಬತ್ತಿಯೆಂದು ಕರೆಯುವುದುಂಟು. ಇದರ ಉರಿಯುವ ದರ ಪ್ರತಿ ಗಜಕ್ಕೆ 90 ರಿಂದ 110 ಸೆಕೆಂಡ್‍ಗಳು. 

(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ